About Us


ಕನ್ನಡನಾಡು ಹಿತರಕ್ಷಣಾ ಸಮಿತಿ


ಕನ್ನಡನಾಡು ಹಿತರಕ್ಷಣಾ ಸಮಿತಿ ದಿನಾಂಕ.29.02.2020 ರಂದು ಪ್ರಾರಂಭ ವಾಯಿತು ಅಂದಿನಿಂದ ಇಲ್ಲಿಯ ವರೆಗೆ ಕನ್ನಡನಾಡು ಹಿತರಕ್ಷಣಾ ಸಮಿತಿ ವತಿಯಿಂದ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ, ಬಡ ವಿಧ್ಯಾರ್ಥಿಗಳ ರೈತರ ನೊಂದವರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡಿದೆ ದಿವಂಗತ ಸೈನಿಕರ ಪತ್ನಿಯರನ್ನು ಗುರುತಿಸಿ ಸನ್ಮಾನಿಸಿ ನಮ್ಮ ಕೈಲದಾಷ್ಟು ಕಿರುಕಾಣಿಕೆ ನೀಡಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ, ಕೋವಿಡ್ 19 ಸಂದರ್ಭದಲ್ಲಿ ರಸ್ತೆಗಿಳಿದು ಹಸಿದವರ ನೋವಿಗೆ ಸ್ಪಂದಿಸಿದ್ದೇವೆ ಕೈಲದಾಷ್ಟು ಸಹಾಯ ಮಾಡಿದ್ದೇವೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದೇವೇ ರೈತರ ಉಳಿವಿಗಾಗಿ ಹೋರಾಟಗಳಲ್ಲಿ ರೈತ ಮುಕಂಡರು ಗಳಿಗೆ ಬೆಂಬಲನೀಡಿ ಜೊತೆಯಾಗಿ ನಿಂತಿದ್ದೇವೆ ಕೂಲಿ ಕಾರ್ಮಿಕರ ದ್ವನಿಯಾಗಿ ಕಾರ್ಮಿಕರಿಗೆ ತೊಂದರೆ ಆಗಿರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಸಂಭದ ಪಟ್ಟ ಅಧಿಕಾರಿಗಳ ಜೋತೆ ಮಾತನಾಡಿ ಸಮಸ್ಯೆ ಪರಿಹಾರ ಮಾಡಿದ್ದೇವೆ ಬಡ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಹಾಯ ಸಹಕಾರ ಮಾಡಿದ್ದೇವೇ ಗುರುಪೀಠ ಗುರುಪರಂಪರೆ ಗೌರವಿಸಿ ಸನ್ಮಾನಿಸಿದೆ ಕಲಾವಿದರನ್ನು ಗುರುತಿಸಿ ಅವರುಗಳ ಯೋಗಕ್ಷೇಮ ವಿಚಾರಿಸಿ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದ್ದೇವೆ ದೇಶ ಸೇವೆ ಮಾಡಿ ನಿವೃತ್ತ ರದಂತಹ ಮಾಜಿ ಸೈನಿಕರನ್ನು ಸಮಾರಂಭಕ್ಕೆ ಆಹ್ವಾನಿಸಿ ಗೌರವ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ ಕನ್ನಡನಾಡು ಹಿತರಕ್ಷಣಾ ಸಮಿತಿ ಕನ್ನಡಪರ ಸಂಘಟನೆ ಯಾಗಿದ್ದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಕನ್ನಡ ಸಾಹಿತ್ಯ ಕವಿಗಳನ್ನು ಕನ್ನಡ ನಾಡಿನಲ್ಲಿ ಕನ್ನಡವನ್ನು ಬಲಪಡಿಸುವ ಉದ್ದೇಶದಿಂದ ಘರ್ಜಿಸು ಕನ್ನಡಿಗ ದ್ವನಿ ಸುರುಳಿ ಯನ್ನೂ ಮಾಡಿದ್ದೇವೆ ಕನ್ನಡನಾಡಿನಲ್ಲಿ ದಬ್ಭಾಳಿಕೆ ವಿರುದ್ಧ ದ್ವನಿ ಎತ್ತಿದ್ದೇವೆ.

ಇಂದಿಗೂ ಕೂಡ ಕಾಡಿನಲ್ಲೇ ಜೀವನ ನಡೆಸುಟ್ಟಿರುವ ಆದಿವಾಸಿ ಬುಡಕಟ್ಟು ಗಿರಿಜನರನ್ನು ಬೇಟಿ ಮಾಡಿ ಕುಂದು ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಬುಡಕಟ್ಟು ಜನರ ಪುನರ್ವಸತಿ ವಿಧ್ಯಾಭ್ಯಾಸ ಗಳ ಜಾಗೃತಿ ಮೂಡಿಸುವ ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಚಾಲಕರ ಮುಷ್ಕರ ಗಳಲ್ಲಿ ಭಾಗವಹಿಸಿದ್ದೇವೇ ನೊಂದು ಬಂದವರ ಸೇವೆಗಾಗಿ ಡಾಕ್ಟರ್ ಲಾಯರ್ ಎಲ್ಲಾ ಕ್ಷೇತ್ರದ ಅಧಿಕಾರಿಗಳ ಸಂಪರ್ಕದಲ್ಲಿದ್ದು ನೊಂದವರ ಪರವಾಗಿ ಸಮಾಜಸೇವೆ ಮಾಡುತ್ತಾ ಕನ್ನಡದ ಉಳಿವಿಗಾಗಿ ಕನ್ನಡದ ಬೆಳವಣಿಗೆಗಾಗಿ ಹೆಚ್ಚಿನ ಮಟ್ಟದಲ್ಲಿ ಸಮಿತಿ ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಹಾಗಾಗಿ ತಾವುಗಳು ನಮ್ಮ ಸಮಿತಿಯ ಕೆಲಸ ಕಾರ್ಯಗಳನ್ನು ಗುರುತಿಸಿ ಕನ್ನಡನಾಡು ಹಿತರಕ್ಷಣಾ ಸಮಿತಿಗೆ ಆರ್ಥಿಕವಾಗಿ ನೆರವು ನೀಡಿದರೆ ಇನ್ನೂ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ತಮ್ಮಗಳ ಗಮನಕ್ಕೆ ತಿಳಿಸುತ್ತಿದ್ದೇವೆ ನಮ್ಮ ಧ್ಯೇಯ ಉದ್ದೇಶ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕನ್ನಡಾಭಿಮಾನ ದಿಂದ ಜಾತಿ ಧರ್ಮ ಆಸ್ತಿ ಅಂತಸ್ತು ಮೇಲೂ ಕೀಳು ಎಂಬುದೆಲ್ಲವ ಬಿಟ್ಟು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ನಾಡು ನುಡಿ ನೆಲ ಜಲ ಸಂಸ್ಕೃತಿ ಸಂಘಜಿವಿಗಳಗಿ ಸಾಮರಸ್ಯದಿಂದ ಮನುಕುಲ ಜೀವನ ನಡೆಸಬೇಕು ಎಂಬ ಅಭಿಲಾಷೆ ಇಂದ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು ಎಲ್ಲರಿಗೂ ವಿಧ್ಯೆ ಕೆಲಸ ಸಮಾನವಾಗಿ ಸಿಗಬೇಕು ಎಲ್ಲಾ ವರ್ಗದ ಜನರು ಸಂತೋಷ ಸಾಮರಸ್ಯ ದಿಂದ ಬಾಳಬೇಕು ಎಂದು ಶಾಂತಿ ಸಹನೆ ಸಹಬಾಳ್ವೆ ಇರುವಂತೆ ನಮ್ಮ ಕೈಲದಾಷ್ಟು ಸಮಾಜಸೇವೆ ಮಾಡಲು ಕನ್ನಡನಾಡು ಹಿತರಕ್ಷಣಾ ಸಮಿತಿ ಕರ್ನಾಟಕ ರಾಜ್ಯದಾದ್ಯಂತ ಕೆ ವಿ ಕೃಷ್ಣಮೂರ್ತಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀಮತಿ ಗೀತಾ ಗಿರಿಜ ರಾಜ್ಯಾಧ್ಯಕ್ಷರು ಪದಾಧಿಕಾರಿಗಳ ಆಯ್ಕೆ ಮಾಡಿದ್ದು ಪದಾಧಿಕಾರಿಗಳು ಸ್ವಯಂ ಸೇವಕರಗಿ ಸಮಿತಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತಾ ಮುನ್ನಡೆಸುತ್ತಿದ್ದಾರೆ ಮುಂದೆ ಹೆಚ್ಚಿನ ಮಟ್ಟದಲ್ಲಿ ನಮ್ಮ ಹಳೆಯ ಸಂಪ್ರದಾಯ ಜಾನಪದ ಕಲೆ ದೇವಸ್ಥಾನ ನಿರ್ಮಾಣ ಶಾಲೆ ನಿರ್ಮಾಣ ವೃದ್ಧಾಶ್ರಮ ನಿರ್ಮಾಣ ಗೋಶಾಲೆ ನಿರ್ಮಾಣ ಅನಾಥಾಶ್ರಮ ನಿರ್ಮಾಣ ವಿಕಲ ಚೇತನರ ಸೇವೆ ಮಾಡುವ ಸಲುವಾಗಿ ನೊಂದಮಹಿಳೆಯರ ಅಭಾಲಷ್ರಮ ಗಳನ್ನು ತೆರೆಯುವ ಆಸಕ್ತಿ ಕನ್ನಡನಾಡು ಹಿತರಕ್ಷಣಾ ಸಮಿತಿಗೆ ಇದೆ ಈ ನಮ್ಮ ವೆಬ್ ಸೈಟ್ ನೋಡುತ್ತಿರುವ ತಾಮ್ಮಗಳ ಸಹಕಾರ ಸಲಹೆ ಧನ ಸಹಾಯ ಸಮಿತಿಗೆ ಅವಶ್ಯವಾಗಿದೆ ತಾವು ಏನಾದರೂ ಸಹಾಯ ಹಸ್ತ ಚಾಚಿದ್ದಲ್ಲಿ ಅದು ನೇರವಾಗಿ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಮುಟ್ಟುತ್ತದೆ ಎಂದು ತಿಳಿಸುತಿದ್ದೇವೆ ಇಷ್ಟು ತಾಳ್ಮೆಯಿಂದ ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮ ಸಮಿತಿಯ ಬಗ್ಗೆ ತಿಳಿದುಕೊಂಡಿದ್ದಕ್ಕಾಗಿ ಧನ್ಯವಾದಗಳು ತಮಗೆ.